ಯುವ ಚೈತನ್ಯ ಯಾತ್ರೆಯ ಯಶಸ್ಸಿನ ಗುಂಗಿನಲ್ಲಿ ಜವಾಬ್ದಾರಿಯೆಡೆಗೆ ಸಾಗುತ್ತಾ . . . . . .

DSC_7933ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಯುವ ಚೈತನ್ಯ ಯಾತ್ರೆ ಸಂಪನ್ನಗೊಂಡಿದೆ.ಹೊಸ ಅನುಭವವೊಂದನ್ನು ನೀಡಿದ ಈ ಯಾತ್ರೆಯ ಅಭೂತ ಪೂರ್ವ ಯಶಸ್ಸಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣರಾದ ಎಲ್ಲರಿಗೂ ಹ್ರದಯಪೂರ್ವಕ ಧನ್ಯವಾದಗಳು.

ಜನವರಿ ೬ರಂದು ಬೆಳಗಾವಿಯಲ್ಲಿ ಪ್ರಾರಂಭವಾದ ಯಾತ್ರೆ ಜನವರಿ ೧೨ ರಂದು ಮೈಸೂರಿನಲ್ಲಿ ಸಮಾರೋಪದೊಡನೆ ಕೊನೆಗೊಂಡಿತು. ಅನೇಕರ ಪರಿಶ್ರಮ ಈ ಯಾತ್ರೆಯ ಯಶಸ್ಸಿನ ಹಿಂದೆ ಇದ್ದರೂ, ಸ್ವಾಮಿ ವಿವೇಕಾನಂದರ ವಿಚಾರಗಳು ಇಂದಿಗೂ ಪ್ರಸ್ತುತ ಹಾಗೂ ಪ್ರಭಾವಿಯಾಗಿರುವುದೇ ಯಾತ್ರೆ ಯಶಸ್ಸಿಗೆ ಪ್ರಮುಖ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

ಇಡೀ ಜೀವಿತಾವಧಿ ಪೂರಾ ಸಾಮಜಿಕ ಜಾಗ್ರತಿಗಾಗಿ ಸ್ಪಂದಿಸಿ, ಭಾರತೀಯರೆಲ್ಲರ ಕರ್ತವ್ಯ ಪ್ರಜ್ನೆಯನ್ನು ಜಾಗ್ರತಗೊಳಿಸಿ, ಸಮಾಜಕ್ಕಾಗಿ ತುಡಿಯಬೇಕೆನ್ನುವ ಕನಸುಗಳನ್ನು ಬಿತ್ತಿದ, ನನಸಾಗಿಸುವ ಮಾರ್ಗವನ್ನೂ ಭೋಧಿಸಿದ, ’ಹಿಂದುತ್ವ’ವನ್ನು ಆದರ್ಶ ಮಾನವನನ್ನು ರೂಪಿಸುವ ಧರ್ಮ ಎಂದು ಹೇಳಿದ, ದೇಶದಲ್ಲಿನ ಸಾಮಾಜಿಕ ಜಾಗ್ರತಿಯ ಜೊತೆಗೆ ವಿದೇಶದಲ್ಲಿಯೂ ಸನಾತನ ಧರ್ಮದ ಧ್ವಜವನ್ನು ಹಾರಿಸಿದ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಮತ್ತು ವಿಚಾರಗಳೇ ಯಾತ್ರೆಯ ಯಶಸ್ಸಿನ ಬೆನ್ನೆಲುಬು. ಸ್ವಾಮಿ ವಿವೇಕಾನಂದರ ವಿಚಾರಗಳ ಬಹುಮುಖೀ ಪ್ರಭಾವ ಇಂದಿಗೂ ಯುವ ಸಮಜದ ಮೇಲೆ ಇದ್ದೇ ಇದೆ ಎಂಬುದಕ್ಕೆ ಯಾತ್ರೆಯಲ್ಲಿ ಭಾಗವಹಿಸಿದ್ದ ಯುವಕರ ಉತ್ಸಾಹ ನೋಡಿದಾಗ, ನಿಜವಾಗಿಯೂ ಸ್ವಾಮಿ ವಿವೇಕಾನಂದರು ಸಮಾಜದ ಮೇಲೆ, ಅದರಲ್ಲಿಯೂ ಯುವಾ ಜನಾಂಗದ ಮೇಲೆ ಬೀರಿರುವ ಪ್ರಭಾವದ ಅರಿವನ್ನು ಪ್ರತ್ಯಕ್ಷವಾಗಿ ಕಂಡಂತೆ ಆಯಿತು.

ಸ್ವಾಮಿ ವಿವೇಕಾನಂದರ ವಿಚಾರದ ಜೊತೆಗೆ ಈ ಯಾತ್ರೆಯಲ್ಲಿ ಸ್ವಚ್ಛ ಭಾರತ ನಿರ್ಮಾಣ ಹಾಗೂ ವ್ಯಸನ ಮುಕ್ತ ಕರ್ನಾಟಕ ನಿರ್ಮಾಣದ ಜಾಗ್ರತಿ ಮಾಡುವ ನಮ್ಮ ಸಂಕಲ್ಪವೂ ಬಹುತೇಕ ಈಡೇರಿದೆ . ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರಮೋದಿಯವರ ಆಶಯದಂತೆ ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಜನತೆಯನ್ನು ಜಾಗ್ರತಿ ಮಾಡುವ ಕಾಯಕವನ್ನೂ ಈ ಯಾತ್ರೆಯೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಇಂದು ಇಡೀ ಯುವ ಜನಾಂಗವನ್ನು ಬಲಿಪಶುವಾಗಿ DSC_8121ತೆಗೆದುಕೊಳ್ಳುತ್ತಿರುವ ಮಾದಕ ವಸ್ತುಗಳ ಬಗ್ಗೆ ಯುವ ಜನಾಂಗವನ್ನು ಜಾಗ್ರ‍ತ ಮಾಡುವ ಮಹತ್ತರವಾದ ಕಾರ್ಯವಂತೂ ನನ್ನನ್ನೂ ಸೇರಿದಂತೆ ಯುವ ಮೋರ್ಚಾದ ಎಲ್ಲಾ ಕಾರ್ಯಕರ್ತರ ಮನಸ್ಸಿನಲ್ಲಿ ಸಾರ್ಥಕ ಭಾವ ಮನೆ ಮೂಡಲು ಕಾರಣವಾಯಿತು.

ಆದರೆ ಈ ಪಯಣದ ಉದ್ದೇಶ ಯಾತ್ರೆಯ ಸಮಾರೋಪದೊಂದಿಗೆ ಕೊನೆಗೊಳ್ಳುವುದಿಲ್ಲವೆಂಬ ಅರಿವೂ ನಮ್ಮ ಕಾರ್ಯಕರ್ತರಿಗಿದೆ. ಇದಕ್ಕಾಗಿಯೇ ಸಂಘಟನೆಯನ್ನು ಗಟ್ಟಿಗೊಳಿಸುತ್ತಾ, ಸಾಮಾಜಿಕ ಜಾಗ್ರ‍ತಿಯ ಕಾರ್ಯವನ್ನೂ ನಿರಂತರವಾಗಿ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಯುವಮೋರ್ಚಾ ಕಾರ್ಯಕರ್ತರು ಕ್ರಿಯಾಶೀಲರಾಗಲಿದ್ದಾರೆ. ಪ್ರಸ್ತುತ ನಮ್ಮ ಮುಂದಿರುವ ಸಂಘಟನೆಯನ್ನು ಗಟ್ಟಿಗೊಳಿಸುವ ಪ್ರಾಥಮಿಕ ಹಾಗೂ ಪ್ರಮುಖ ಹೆಜ್ಜೆಯಾದ ಸದಸ್ಯತಾ ಅಭಿಯಾನದ ಕಾರ್ಯದಲ್ಲಿ ಯುವಮೋರ್ಚಾ ಕಾರ್ಯಕರ್ತರು ಹೆಚ್ಚಿನ ಸಮಯವನ್ನು ನೀಡಿ ಸಕ್ರಿಯರಾಗುತ್ತಿದ್ದಾರೆ.

ಬಿಜೆಪಿ ರಾಷ್ಟ್ರ‍ೀಯ ಅಧ್ಯಕ್ಷರಾದ ಶ್ರೀ ಅಮಿತ್ ಶಾರವರ ಬೆಂಗಳೂರು ಭೇಟಿ ಕಾರ್ಯಕರ್ತರ ಜವಾಬ್ದಾರಿಯನ್ನೂ ಹೆಚ್ಚಿಸಿದೆ ಮತ್ತು ಉತ್ಸಾಹವನ್ನೂ ಮೂಡಿಸಿದೆ. ಒಂದು ಕೋಟಿ ಸದಸ್ಯರನ್ನು ಮಾಡುವ ರಾಜ್ಯ ಬಿಜೆಪಿಯ ಗುರಿ ಸಾಧನೆಗಾಗಿ ಯುವ ಮೋರ್ಚಾ ಕಾರ್ಯಕರ್ತರು ಹೆಗಲು ಕೊಡಲಿದ್ದಾರೆ. ಯುವಮೋರ್ಚಾದ ಈ ಎಲ್ಲಾ ಕ್ರಿಯೆಗಳು ಆರಂಭ ಮಾತ್ರ. “ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂಬ ವಿವೇಕ ವಾಣಿಯಂತೆ ಮುನ್ನಡೆಯುತ್ತಿರುವ ನಮ್ಮ ಎಲ್ಲಾ ಚಟುವಟಿಕೆಗಳು ತಮ್ಮೆಲ್ಲರ ನಿರಂತರ ಸಲಹೆ, ಸಹಕಾರ, ಆಶೀರ್ವಾದಗಳೊಡನೆ ಮುಂದುವರೆಯುತ್ತಲೇ ಇರುತ್ತದೆ.

ಮುಂದೆ ಇದೇ ಅಂಕಣದಲ್ಲಿ ಭೇಟಿಯಾಗುವಾ. . . .

ನಮಸ್ಕಾರ.

One thought on “ಯುವ ಚೈತನ್ಯ ಯಾತ್ರೆಯ ಯಶಸ್ಸಿನ ಗುಂಗಿನಲ್ಲಿ ಜವಾಬ್ದಾರಿಯೆಡೆಗೆ ಸಾಗುತ್ತಾ . . . . . .

  • By naga bhushan - Reply

    I always see you near home during dropping kids to school, I admire a lot about your simplicity, ground to earth, activeness & leadership. Your humbleness to give good things to society and nation, which shows you are a son of whole India. I salute your brave ideas and restless schedule towards implementing the social schemes with people, without giving much time to your family…..We are proud of you sir…………………..

Leave a Reply to naga bhushan Cancel reply

Your email address will not be published. Required fields are marked *
You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>