ಕರವ ಜೋಡಿಸ ಬನ್ನಿ, ಈ ರಾಷ್ಟ್ರ ಕಾರ್ಯದಲಿ

ನಾನು ಅನೇಕ ಬಾರಿ ಇಲ್ಲಿಗೆ ಭೇಟಿ ನೀಡಿದ್ದೇನೆ. ಅದರಲ್ಲೂ ಯುವಮೋರ್ಚಾದ ವತಿಯಿಂದ ಇಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣದ ಸಂಕಲ್ಪ ಮಾಡಿದಾಗಿನಿಂದ ಈ ಗೊರಟಾ ಗ್ರಾಮದ ಭೇಟಿ ವಿಶೇಷವೆಂದೇನೂ ಅಲ್ಲ. ಆದರೆ ನಾನು ಈ ಬಾರಿ ಗೊರಟಾಗೆ ಭೇಟಿ ನೀಡಿದ್ದು ಮೇ ೯ರಂದು. ಈ ಮೇ ೯ಕ್ಕೂ ಗೊರಟಾ ಗ್ರಾಮಕ್ಕೂ ವಿಶೇಷವಾದ ನಂಟು. ಗೊರಟಾ ಗ್ರಾಮದ ಇತಿಹಾಸದಲ್ಲಿ ಈ ದಿನವನ್ನಂತೂ ಎಂದಿಗೂ ಮರೆಯುವಂತೆಯೇ ಇಲ್ಲ. ಇತಿಹಾಸದ ಅಂಅನ ನೆನಪು ಬಂದಾ ಕೂಡಲೇ ಅಂದು ಗೊರಟಾ ಗ್ರಾಮದ ಜನತೆ ಅನುಭವಿಸಿದ ನೋವು, ಅಂದಿನ ಗೊರಟಾ ಗ್ರಾಮದ ಚಿತ್ರಣ ಕಣ್ಣಮುಂದೆ ಹಾದು ಹೋದವು.10659405_383858115136400_6809516800445036903_n

೧೯೪೮ ನೇ ಇಸವಿಯ ಇದೇ ದಿನ(ಮೇ, ೯) ಬೆಳಿಗ್ಗೆ ೮ ಗಂಟೆಗೆ ೩ ಸಾವಿರ ಜನ ಹೈದರಾಬಾದ್ ನಿಜಾಮನ ಬೆಂಬಲಿಗ ರಝಾಕಾರರೌ ಶಿವಪ್ಪಲಿಂಬೆಕಾಯಿ ಎಂಬ ರೈತನನ್ನು ಜೀವ ಇರುವಾಗಲೇ ಕಾಲಿಗೆ ಹಗ್ಗ ಕಟ್ಟಿ ಹುಲ್ಲಿನ ಬಣವೆಯೊಳಗೆ ಹಾಕಿ ಬೆಂಕಿ ಹಚ್ಚಿದರು. ಊರನ್ನು ಸುತ್ತುವರಿದು ಗೋಲಿಬಾರ್ ನಡೆಸಿದರು. ಮಕ್ಕಳು, ಹೆಂಗಸರು, ಮುದುಕರು ಎನ್ನದೇ ಎಲ್ಲರನ್ನೂ ಕ್ರೂರವಾಗಿ ಹಿಂಸಿಸಿದರು. ಸಿಕ್ಕ ಸಿಕ್ಕವರನ್ನು ಬರ್ಭರವಾಗಿ ಕೊಂದರು. ಒಂದೇ ದಿನ ನೂರಾರು ಜನ ಪ್ರಾಣ ಕಳೆದುಕೊಂಡರು. ರಝಾಕಾರರು ಹಚ್ಚಿದ ಬೆಂಕಿಯಿಂದ ಊರಿಗೆ ಊರೇ ಹತ್ತಿ ಉರಿಯಿತು.ಜನ ಪ್ರಾಣ ಭೀತಿಯಿಂದ ಮನೆಗಳನ್ನು ಬಿಟ್ಟು ಓಡಿ ಹೋದರು. ಸತ್ತ ಜನ ದನ, ಕರುಗಳ ಸಂಸ್ಕಾರ ಮಾಡಲು ಯಾರೂ ಇಲ್ಲದೆ ಊರು ದುರ್ವಾಸನೆಯಿಂದ ಕಾಗೆ ನಾಯಿಗಳ ನರಿಗಳ ತಾಣವಾಯಿತು. ಅಂದು ’ವಂದೇ ಮಾತರಂ’ ಹೇಳಿ, ತ್ರಿವರ್ಣ ಧ್ವಜವನ್ನು ಹಾರಿಸಿದರ ಈ ಗ್ರಾಮದ ಜನರು ರಝಾಕಾರರಿಂದ ಅನುಭವಿಸಿದ ನೋವು ಇದು. ಅಂದಿನ ಈ ಎಲ್ಲಾ ಘಟನೆಗಳಿಗೆ ಸಾಕ್ಷಿಯಾದ ಊರ ಮದ್ಯದಲ್ಲಿ ಇರುವ ಅರಳಿ ಮರದ ಕೆಳಗೆ ನಿಂತ ನನಗೆ ಇತಿಹಾಸದ ಅಂದಿನ ಘಟನೆಗಳು ಕಾಡಿದವು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಈ ಗ್ರಾಮದ ಜನತೆ ಅಂದು ಅನುಭವಿಸಿದ ನೋವುಗಳ ಚಿತ್ರಣ ಕಣ್ಣ ಮುಂದೆ ಬಂತು. ಇವರೆಲ್ಲರ ಸ್ಮರಣೆಯ ಕಾರ್ಯದಲ್ಲಿ ನಾವುಗಳು ಭಾಗಿಗಳಾಗುವ ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯ. ರಾಜಕೀಯ ಪಕ್ಷವೆಂದ ಮೇಲೆ ಜನಪರವೆನ್ನುವ ಅನೇಕ ಕಾರ್ಯಗಳನ್ನು ಮಾಡಿರುತ್ತೇವೆ. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ನಯ್ಗಿದ ಈ ಗ್ರಾಮವನ್ನು ಸ್ಮರಿಸುವ ಕಾರ್ಯವಿದೆಯೆಲ್ಲಾ. . ., ನಿಜವಾಗಿಯೂ ಮನಕೆ ಮುದ ನೀಡುವ ಮತ್ತು ರಾಜಕೀಯ ಪಕ್ಷದ ಕಾರ್ಯಕರ್ತರಾದವರಿಗೆ ಹೆಮ್ಮೆಯ ವಿಷಯ. ಇಂತಹ ಒಂದು ಮಹಾನ್ ಕಾರ್ಯದಲ್ಲಿ ಸಿಗುವ ತ್ರುಪ್ತಿ ಇನ್ನಾವ ಕಾರ್ಯದಲ್ಲೂ ಸಿಗಲಾರದು. ಅಂತಹದೊಂದು ಕಾರ್ಯದಲ್ಲಿ ಭಾಗಿಗಳಾಗಿದ್ದೇವೆಂಬ ಸಾರ್ಥಕಭಾವ ನಮ್ಮದಾಗಿದೆ.DSC_6096

ಈ ನಿಟ್ಟಿನಲ್ಲಿ ಯುವಮೋರ್ಚಾ ಹಮ್ಮಿಕೊಂಡಿರುವ ಮಹಾನ್ ಕಾರ್ಯ ವಾದ. ’ಹುತಾತ್ಮರ ಸ್ಮಾರಕ ನಿರ್ಮಾಣ’ ಕಾರ್ಯ ಭರದಿಂದ ಸಾಗುತ್ತಿದ್ದು, ಎಲ್ಲವೂ ಯೋಜಿತ ರೀತಿಯಲ್ಲಿಯೇ ನಡೆಯುತ್ತಿದೆ. ದಿನಾಂಕ ೧೭ ಸೆಪ್ಟೆಂಬರ್ ೨೦೧೪ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಮಿತ್ ಶಾರವರು ಭೂಮಿ ಪೂಜೆಯನ್ನು ನೆರವೇರಿಸಿದ ನಂತರ ನಿರಂತರವಾಗಿ ನಡೆಯುತ್ತಿರುವ ಕಾರ್ಯಗಳಿಂದಾಗಿ ಇಂದು ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ. ಮೊಟ್ಟ ಮೊದಲಯದಾಗಿ ಇಲ್ಲಿಯವರೆಗಿನ ಕಾರ್ಯಗಳಲ್ಲಿ ಮಾರ್ಗದರ್ಶನ ನೀಡಿದ, ಹಿರಿಯರಿಗೆ, ಸಹಕಾರ ನೀಡಿದ ಸ್ಥಳೀಯ ಹಿರಿಯ, ಕಿರಿಯ ಕಾರ್ಯಕರ್ತ ಬಂಧುಗಳಿಗೆ ಅಭಿಮಾನ ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಇದರ ಜೊತೆಗೆ ಇಡೀ ರಾಜ್ಯಕ್ಕೆ ಗೊರಟಾ ಗ್ರಾಮದ ಹುತಾತ್ಮರನ್ನು ಪರಿಚಯಿಸಿರುವುದರಲ್ಲಿ ಯುವಮೋರ್ಚಾ ಕಾರ್ಯಕರ್ತರ ಪಾತ್ರ ಮಹತ್ವದ್ದು. ಈ ಒಂದು ಪ್ರೇರಣಾದಾಯಿ ಕಾರ್ಯಕ್ರಮದಲ್ಲಿ ನನ್ನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುತ್ತಿರುವ ಈ ಎಲ್ಲಾ ಕಾರ್ಯಕರ್ತ ಬಂಧುಗಳ ಪರಿಶ್ರಮವೇ ನಮ್ಮೆಲ್ಲಾ ಶಕ್ತಿಯ ಮೂಲ. ಇವರೆಲ್ಲರಿಗೂ ನನ್ನ ವೈಯುಕ್ತಿಕವಾದ ಧನ್ಯವಾದಗಳು.

ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಂಗ್ರಹಿಸಿದ ಹಣದ ಜೊತೆಗೆ ದಾನಿಗಳು ನೀಡಿದ ಸಹಕಾರದಿಂದ ಇಲ್ಲಿಯವರೆಗೂ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತಾ ಇದೆ. ಬಂಧುಗಳೇ, ಈ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ತಮಗೆಲ್ಲಾ ತಿಳಿದಿರುವಂತೆ ಈ ಸ್ಥಳದಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣ ಮಾತ್ರವಲ್ಲದೆ ಶ್ರೀ ಸರ್ದಾರ್ ವಲ್ಲಭಾಭಾಯಿ ಪಟೇಲ್ರವರ ಪ್ರತಿಮೆಯ ನಿರ್ಮಾಣ ಕಾರ್ಯವನ್ನೂ ಮಾಡಲಾಗುತ್ತಿದೆ. ಜೊತೆಗೆ ಇಡೀ ಗೊರಟಾ ಗ್ರಾಮವನ್ನೂ ಸರ್ವತೋಮುಖವಾಗಿ ಅಭಿವ್ರದ್ಧಿ ಪಡಿಸುವ ಯೋಜನೆಯೂ ಕಾರ್ಯಗತವಾಗುತ್ತಿದೆ. ಇಡೀ ದೇಶದ ಜನತೆಯು ಅದರಲ್ಲೂ ಯುವಕರು ಈ ಗ್ರಾಮಕ್ಕೆ ಭೇಟಿ ನೀಡಿ ಪ್ರೇರಣೆ ಪಡೆಯಬೇಕೆನ್ನುವ ನಿಟ್ಟಿನಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ನಮ್ಮ ಈ ಎಲ್ಲಾ ಯೋಜನೆಗಳೆಲ್ಲವೂ ಪೂರ್ಣಗೊಳ್ಳಲು ಕಾರ್ಯಕರ್ತರ ಶ್ರಮದೊಂದಿಗೆ ಉದಾರ ಮನಸ್ಸಿನಿಂದ ತನು, ಮನ ಮತ್ತು ಧನಗಳ ಸಹಕಾರ ನೀಡುವ ವ್ಯಕ್ತಿಗಳ ಬೆಂಬಲವೂ ಅತ್ಯಗತ್ಯ. ಇವರೆಲ್ಲರ ಸಹಕಾರದಿಂದ ಬರುವ ೧೭, ಸೆಪ್ಟೆಂಬರ್ ೨೦೧೫ರಂದು ನಮ್ಮ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರಮೋದಿಯರು ಈ ಸ್ಮಾರಕವನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮ ಮುಗಿಯುವ ತನಕ ನಮ್ಮ ಜವಾಬ್ದಾರಿ ಇದ್ದೇ ಇರುತ್ತದೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೇ ಭೂಮಿ ಪೂಜೆ ಮಾಡಿರುವುದು, ನಮ್ಮ ಪಕ್ಷದ ಹಿರಿಯರೂ ದೇಶ ಕಂಡ ಮಹಾನ್ ವ್ಯಕ್ತಿಯಾದ ಮಾನ್ಯ ಪ್ರಧಾನಿ ಶ್ರೀ ನರೇಂದ್ರಮೋದಿಯವರೇ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದು ಈ ಕಾರ್ಯಕ್ಕೆ ನಮ್ಮ ಪಕ್ಷದ ಹಿರಿಯರು ಕೊಟ್ಟಿರುವ ಮಹತ್ವವನ್ನು ತೋರಿಸುತ್ತದೆ. ಆದ್ದರಿಂದಲೇ ನಮ್ಮ ಜವಾಬ್ದಾರಿಯೂ ಜಾಸ್ತಿಯಿದೆ. ಮೊದಲಿನಿಂದಲೂ ನಮ್ಮೊಂದಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೈಜೋಡಿಸಿರುವ ನಿಮ್ಮಂತಹ ಸಾವಿರಾರು ಹಿತೈಷಿಗಳಿಂದ ಈ ಕಾರ್ಯಗಳೆಲ್ಲವೂ ಸುಸೂತ್ರವಾಗಿ ನೆರವೇರುತ್ತದೆ ಎನ್ನುವ ನಂಬಿಕೆಯೂ ನನಗಿದೆ.

ಆದರೂ ನಿಮ್ಮಗಳೆಲ್ಲರಲ್ಲೂ ಮತ್ತೊಮ್ಮೆ ಮನವಿ ಮಾಡುತ್ತಿದ್ದೇನೆ. ಬನ್ನಿ, ಈ ಮಹಾನ್ ಕಾರ್ಯವನ್ನು ಪರಿಪೂರ್ಣಗೊಳಿಸಲು ಅಗತ್ಯವಾದ ಸಹಕಾರ ನೀಡಿ, ೧೭, ಸೆಪ್ಟೆಂಬರ್ ೨೦೧೫ ರಂದು ಮಾನ್ಯ ಶ್ರೀ ನರೇಂದ್ರ ಮೋದಿಯವರು ಭಾಗವಹಿಸುವ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ. ಭಾಗವಹಿಸುವ ಮೂಲಕ ಈ ಕಾರ್ಯಕ್ರಮವನ್ನು ಅವಿಸ್ಮರಣೀಯವನ್ನಾಗಿಸಿ ಎಂಬ ಮನವಿಯನ್ನು ಮಾಡುತ್ತಿದ್ದೇನೆ.

ದಯವಿಟ್ಟು “ಕರವ ಜೋಡಿಸ ಬನ್ನಿ, ಈ ರಾಷ್ಟ್ರ ಕಾರ್ಯದಲಿ”

ವಂದನೆಗಳೊಂದಿಗೆ, ತಮ್ಮವ,

ಪಿ.ಮುನಿರಾಜುಗೌಡ
ರಾಜ್ಯಾಧ್ಯಕ್ಷರು ಬಿಜೆಪಿ ಯುವಮೋರ್ಚಾ-ಕರ್ನಾಟಕ

10628427_302502323271980_22621146764750207_n